
ಕಳಸ ಲೈವ್ ವರದಿ
ಕಳಸ ಬಿ.ವಿ.ರವಿ ರೈ ಅವರ ನಿರ್ಮಾಣದ ಬಹು ನಿರೀಕ್ಷೆಯ “ ಸು ಫ್ರಮ್ ಸೋ “ ಚಲನಚಿತ್ರ ಇದೇ ತಿಂಗಳ 25 ರಂದು ತೆರೆಗೆ ಬರಲಿದೆ.
ಸಿನಿಮಾದ ಪ್ರಮುಖ ಪಾತ್ರದಲ್ಲಿ ಜೆ.ಪಿ ತುಮ್ಮಿನಾಡು, ‘ಕಾಂತಾರ’ ಚಿತ್ರ ಖ್ಯಾತಿಯ ಶನಿಲ್ ಗುರು, ದೀಪಕ್ ರೈ ಪಣಾಜೆ, ಪ್ರಕಾಶ್ ತುಮ್ಮಿನಾಡು ಇದ್ದಾರೆ. ಇದರಲ್ಲಿ ‘ಟೋಬಿ’ ಸಿನಿಮಾದಲ್ಲಿ ನಟಿಸಿರುವ ಸಂಧ್ಯಾ ಅರಕರೆ ನಾಯಕಿಯಾಗಿದ್ದು, ಇತರ ಪಾತ್ರಗಳಲ್ಲಿಯೂ ಕರಾವಳಿಯ ಹೊಸ ಪ್ರತಿಭಾನ್ವಿತರಿಗೆ ಅವಕಾಶ ಕಲ್ಪಿಸಿದೆ ಚಿತ್ರತಂಡ.
ತುಳು ಚಿತ್ರರಂಗದ ಜೆ ಪಿ ತುಮ್ಮಿನಾಡು ನಿರ್ದೇಶನದ ಸಿನಿಮಾ ‘ಸು ಫ್ರಮ್ ಸೋ’ ನಿರ್ದೇಶಕ ರಾಜ್ ಬಿ. ಶೆಟ್ಟಿ ಗ್ಯಾಂಗ್ ಜತೆ ‘ಗರುಡ ಗಮನ ವೃಷಭ ವಾಹನ’, ‘ಕಥಾ ಸಂಗಮ’ ಸಿನಿಮಾಗಳಲ್ಲಿ ನಟರಾಗಿ, ನಿರ್ದೇಶನದಲ್ಲಿ ತೊಡಗಿದ್ದ ಅವರು ‘ಮೀರಾ’, ‘ಕಟ್ಟೆಮಾರ್’, ‘ಕಟಪಾಡಿ ಕಟ್ಟಪ್ಪ’ ಎಂಬ ತುಳು ಸಿನಿಮಾಗಳನ್ನು ನಿರ್ದೇಶಿಸಿ ನಟನೆಯಲ್ಲಿಯೂ ಗೆದ್ದವರು. ಅವರೀಗ ‘ಸು ಫ್ರಮ್ ಸೋ’ ಸಿನಿಮಾ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿ ನಿರ್ದೇಶನ ಮಾಡಿದ್ದಾರೆ. ತುಮ್ಮಿನಾಡುಗೆ ರಾಜ್ ಬಿ. ಶೆಟ್ಟಿ ಈ ಸಿನಿಮಾ ಮಾಡಿದ್ದಾರೆ.
ಕಾಮಿಡಿ ಥ್ರಿಲ್ಲರ್ ‘ಸು ಫ್ರಮ್ ಸೋ’ ಸಿನಿಮಾ ಟೈಟಲ್ನ ಅರ್ಥ ಏನು ಎಂಬುದು ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿತ್ತು.ಇದೀಗ ಟ್ರೆöÊಲರ್ ಬಿಡುಗಡೆಯಲ್ಲಿ ಸುಲೋಚನ ಫ್ರಮ್ ಸೋಮೇಶ್ವರ ಎಂಬುದು ಗೊತ್ತಾಗಿದೆ.
ಈ ಸಿನಿಮಾದ ಸಂಗೀತ ನಿರ್ದೇಶಕ ಸುಮೇದ್ ಕೆ. ವಿಶೇಷತೆ ಎಂದರೆ ಇವರು ಇನ್ನೂ ಕಾಲೇಜು ಓದುತ್ತಿರುವ ೨೦ರ ಹರೆಯದ ಯುವಕ. ಈ ಚಿತ್ರದ ಹಾಡೋಂದು ಈಗಾಗಲೇ ಬಿಡುಗಡೆಯಾಗಿದ್ದು, ಸಖತ್ ವೈರಲಾಗಿದೆ.
ಚಿತ್ರದ ಟ್ರೆöÊಲರ್ ಮಂಗಳವಾರ ಬಿಡುಗಡೆಯಾಗಿದ್ದು, ಟ್ರೆöÊಲರ್ ನೋಡಿದಾಗಲೇ ಇದೊಂದು ಗ್ರಾಮೀಣ ಸೊಗಡಿನ ಪಕ್ಕಾ ಕಾಮಿಡಿ ಚಿತ್ರವಾಗಿದೆ.
ಚಿತ್ರದ ನಿರ್ಮಣದಲ್ಲಿ ಕಳಸದ ರವಿ ರೈ ಜೊತೆ ಶಶಿಧರ ಶೆಟ್ಟಿ ಬರೋಡ, ರಾಜ್ ಬಿ ಶೆಟ್ಟಿ ಇದ್ದಾರೆ.
ಬಿ.ವಿ.ರವಿ ರೈ ಈ ಹಿಂದೆ ಮೈ ನೇಮ್ ಈಸ್ ಅಣ್ಣಪ್ಪ ಎನ್ನುವ ತುಳು ಚಿತ್ರದ ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಕಲಿರಿಸಿದ ರೈಗಳು ನಂತರ ವೃಷಬ್ ಶೆಟ್ಟಿಯವರ ಜೊತೆಗೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಕಾಸರಗೋಡು ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಯಶಸ್ವಿಯಾದರು.ನಂತರ ಲೈಟರ್ ಬುದ್ದ ಸಂಸ್ಥೆಯಿAದ ಗರುಡ ಗಮನ ವೃಷಭ ವಾಹನ ಚಿತ್ರ ನಿರ್ಮಾಣದಲ್ಲಿ ಸಹಭಾಗಿಯಾಗಿ ಅದರಲ್ಲೂ ಯಶಸ್ವಿಯಾಗಿ. ಟೋಬಿ ಎಂಬ ಸಿನಿಮಾದ ನಿರ್ಮಾಪಕ ರಾಗಿ ಇದೀಗ ಇವರ ಐದನೇ ಚಿತ್ರ ಸು ಫ್ರಮ್ ಸೋ ಬಹು ನಿರೀಕ್ಷಿತ ಚಿತ್ರವಾಗಿದೆ.