
ಕಳಸ ಲೈವ್ ವರದಿ
ತಾಲ್ಲೂಕಿನ ಹಿರೇಬೈಲು ಗ್ರಾಮದಲ್ಲಿದ್ದ ಸ್ಪಂದನ ಪಾಲಿಕ್ಲಿನಿಕ್ ಗೆ ಮೂಡಿಗೆರೆ ತಾಲ್ಲೂಕು ವೈದ್ಯಾಧಿಕಾರಿಗಳು ಬೀಗ ಜಡಿದಿದ್ದಾರೆ.
ಕಳಸ ಪಿ ಎಸ್ ಐ ಚಂದ್ರಶೇಖರ್, ಇಡಕಣಿ ಗ್ರಾಮ ಪಂಚಾಯ್ತಿ ಪಿಡಿಓ ಪ್ರಕಾಶ್ ಜೊತೆಗೆ ಗುರುವಾರ ಸಂಜೆ ಸ್ಪಂದನ ಕ್ಲಿನಿಕ್ ಗೆ ಭೇಟಿ ನೀಡಿದ ತಾಲ್ಲೂಕು ವೈದ್ಯಾಧಿಕಾರಿಗಳಾದ ಹರೀಶ್ ಬಾಬುರವರು ಸ್ಪಂದನ ಪಾಲಿಕ್ಲಿನಿಕ್ ನಲ್ಲಿ ವೈದ್ಯ ವೃತ್ತಿ ನಡೆಸಲು ಸೂಕ್ತ ದಾಖಲೆಗಳನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ಕ್ಲಿನಿಕ್ ನಲ್ಲಿದ್ದ ಸಂಬAಧಪಟ್ಟವರಲ್ಲಿ ಕೆ.ಎಂ.ಸಿ ನೋಂದಿತ ವೈದ್ಯರು ಇಲ್ಲದಿರುವುದು, ದರ ಪಟ್ಟಿ ಲಗತ್ತಿಸದೆ ಇರುವುದು, ಅನ್ಯ ರೀತಿಯ ಪ್ರಕಾರದ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವುದು, ಜೈವಿಕ ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಮಾಡದೆ ಇರುವುದು ಇಲ್ಲಿ ಕಂಡು ಬಂದಿದ್ದು, ಕೆ.ಪಿ.ಎಂ.ಇ ಕಾಯ್ದೆಗಳು ಇಲ್ಲಿ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಕ್ಲಿನಿಕ್ ಗೆ ಬೀಗ ಜಡಿದಿರುತ್ತಾರೆ.
ಹಿರೇಬೈಲ್ ನಲ್ಲಿರುವ ಸ್ಪಂದನ ಪಾಲಿಕ್ಲಿನಿಕ್ ಬಗ್ಗೆ ಇಡಕಣಿ ಗ್ರಾಮ ಪಂಚಾಯಿತಿ ಪಿಡಿಓ ರವರಿಗೆ ದೂರು ಸಲ್ಲಿಕೆ ಮಾಡಲಾಗಿತ್ತು.
