

ಕಳಸ ಲೈವ್ ವರದಿ
ಕಳಸ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೀದಿ ನಾಯಿಗಳು ಕರುವೊಂದನ್ನು ಅಟ್ಟಾಡಿಸಿ ಎಲೆದಾಡುತ್ತಿದ್ದನ್ನು ಗಮನಿಸಿದ ವಿದ್ಯಾರ್ಥಿಗಳು ಕರುವನ್ನು ನಾಯಿ ಬಾಯಿಂದ ರಕ್ಷಿಸಿದ್ದಾರೆ.
ಕಳಸ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿಯೇ ನಾಯಿಗಳು ಕರುವೊಂದರ ಮೇಲೆರಗಿ ಕಚ್ಚಿ ಗಾಯಗೊಳಿಸಿವೆ.ಕೂಡಲೇ ವಿದ್ಯಾರ್ಥಿಗಳು ನಾಯಿಗಳನ್ನು ಓಡಿಸಿದ್ದಾರೆ.ಆದರೆ ತೀರ ಗಾಯಗೊಂಡ ಕರು ಎದ್ದು ನಡೆಯಲಾಗದೆ ಒದ್ದಾಡುತ್ತಿತ್ತು.ಪಶು ವೈದ್ಯರನ್ನು ಕರೆಸಿ ಗಾಯಗೊಂಡ ಕರುವಿಗೆ ಚಿಕಿತ್ಸೆ ನೀಡಿದ್ದಾರೆ.ವಿದ್ಯಾರ್ಥಿಗಳು ಕಾಲೇಜು ಬಳಿಯೇ ಗಾಯಗೊಂಡ ಕರುವನ್ನು ಪೋಷನೆ ಮಾಡಿ ನಂತರ ಕರುವಿನ ವಾರಿಸುದಾರರನ್ನು ಪತ್ತೆ ಹಚ್ಚಿ ಅವರಿಗೆ ಹಸ್ತಾಂತರಿಸಿದ್ದಾರೆ.
ನಾಯಿಗಳ ಸಂಖ್ಯೆ ಶಾಲಾ ಕಾಲೇಜುಗಳ ಬಳಿಯೂ ಮಿತಿ ಮೀರಿದೆ. ಶಾಲಾ ಕಾಲೇಜಿಗೆ ಬರುವಾಗಲೇ ನಾಯಿಗಳ ಹಿಂಡುಗಳೇ ಕಾಣಸಿಗುತ್ತವೆ.ಇದರಿಂದ ವಿದ್ಯಾರ್ಥಿಗಳು ಇಲ್ಲಿ ನಾಯಿಗಳು ನಮ್ಮ ಮೇಲೆ ದಾಳಿ ಮಾಡುತ್ತವೆಯೋ ಎಂದು ಭಯದಿಂದಲೇ ಓಡಾಡಬೇಕಾಗಿದೆ. ಕಾಲೇಜು ಆವಾರಣದ ಬಳಿ ಒಂದಷ್ಟು ನಾಯಿಗಳು ಅಲ್ಲೇ ಬೀಡು ಬಿಟ್ಟಿದ್ದು ಇದು ವಿದ್ಯಾರ್ಥಿಗಳನ್ನು ಕೂಡ ಅಟ್ಟಾಡಿಸಿಕೊಂಡು ಬರುತ್ತಿದೆ.ಇದರಿಂದ ಕಾಲೇಜು ಆವರಣದಲ್ಲಿ ತಿರುಗಾಡಲು ಆಗುತ್ತಿಲ್ಲ.ಈ ಬಗ್ಗೆ ಸಂಬAದಪಟ್ಟವರು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
