
ಕಳಸ ಲೈವ್ ವರದಿ
ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿರುವ ಹಿನ್ನಲೆಯಲ್ಲಿ ಕುದುರೆಮುಖ ಪೊಲೀಸ್ ಠಾಣೆಯ ಸಿಬ್ಬಂದಿ ಸಿದ್ದೇಶ್ ವಿರುದ್ದ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ ೧೫ ರಂದು ರಾತ್ರಿ ಸಮಯದಲ್ಲಿ ಸಂಸೆ ಗ್ರಾಮದ ಬಸ್ತಿಗದ್ದೆ ನಾಗೇಶ್ ತನ್ನ ಆಟೋದಲ್ಲಿ ಸಂಸೆಯ ಕೃಷಿಕರೊಬ್ಬರ ಮನೆಯಿಂದ ತೋಟದ ಕೆಲಸ ಮುಗಿಸಿ ಬರುವಾಗ, ದಾರಿ ನೋಡಲು ತನ್ನ ಮೊಬೈಲ್ ನ ಲೈಟ್ ಹಾಕಿದಾಗ ಆ ವೇಳೆಯಲ್ಲಿ ಸ್ಥಳದಲ್ಲಿದ್ದ ಕುದುರೆಮುಖ ಪೊಲೀಸ್ ಠಾಣೆಯ ಸಿಬ್ಬಂದಿ ಸಿದ್ದೇಶ್ ಎಂಬುವವರು ನಾನು ಕುಡಿಯೋದನ್ನು ವಿಡಿಯೋ ತೆಗೆಯುತ್ತಿದ್ದೀಯಾ ಎಂದು ತನಗೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುತ್ತಾರೆ ಎಂದು ಬಸ್ತಿಗದ್ದೆ ನಾಗೇಶ್ ದೂರು ನೀಡಿದ್ದಾರೆ.
ಈ ಬಗ್ಗೆ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪೊಲೀಸ್ ಸಿದ್ದೇಶ್ ಹಾಗೂ ಇತರೆ ೨ ಜನರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಹಲ್ಲೆಗೊಳಲಾಗಿದ್ದ ನಾಗೇಶ್ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ