ಕಳಸ ಲೈವ್ ವರದಿ
ಕಳಸದ ಹೊಸೂರು ಕೊಳಮಗೆ ಬಳಿ ವಾಹನವೊಂದು ಭದ್ರಾ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕಳಸ-ಕಳಕ್ಕೋಡು ರಸ್ತೆಯ ಮಧ್ಯೆ ಸಿಗುವ ಹೊಸೂರು ಕೊಳಮಗೆ ಬಳಿ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕುರುಹು ಕಂಡು ಬಂದಿದ್ದು, ವಾಹನವು ರಸ್ತೆಯ ಅಂಚಿನಲ್ಲೆ ಇರುವ ಭದ್ರಾ ನದಿಗೆ ಹೊಗಿರುವ ವಾಹನ ಟಯರ್ ನ ಕುರುಹುಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ವಾಹನ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕಳಸ ಪೊಲೀಸ್ ಠಾಣೆ ಪೊಲೀಸರು ಆಗಮಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದು ನದಿಯಲ್ಲಿ ವಾಹನ ಇರುವ ಕುರುಹುಗಳು ಕಂಡು ಬರುತ್ತಿಲ್ಲ.
ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿರುವುದರಿಂದ ವಾಹನವು ನದಿಯಲ್ಲಿ ಮುಳುಗಿರಬಹುದು ಎನ್ನಲಾಗುತ್ತಿದ್ದು, ಯಾವ ವಾಹನ, ಯಾರ ವಾಹನ, ಯಾವುದು ವಾಹನ, ಎಷ್ಟು ಜನ ಇದ್ದರು ಎನ್ನುವ ಯಾವುದೇ ಮಾಹಿತಿಗಳು ನಿಖರವಾಗಿ ಲಭ್ಯವಾಗಲಿಲ್ಲ.
