ಕಳಸ ಲೈವ್ ವರದಿ
ಕಳಸ ಕೊಳಮಗೆ ಎಂಬಲ್ಲಿ
ಗಣಪತಿಕಟ್ಟೆ ಶಮಂತ ತನ್ನ ಪಿಕಪ್ ವಾಹನ ಸಹಿತ ಭದ್ರಾ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೇ ಆತನ ತಾಯಿ ರವಿಕಲಾ (35) ತನ್ನ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗನ ಸಾವಿನಿಂದ ಸಾಕಷ್ಟು ನೊಂದು ಕೊಂಡ ತಾಯಿ ರಾತ್ರಿ ಕೆರೆಗೆ ಹಾರಿದ್ದಾರೆ. ಮನೆಯಲ್ಲಿ ರವಿಕಲಾ ಇಲ್ಲದೆ ಇರುವುದನ್ನು ಗಮನಿಸಿ ಹುಡುಕಾಟ ನಡೆಸಿದ್ದಾರೆ. ಕೆರೆಗೆ ಹಾರಿರುವುದು ಗೊತ್ತಾಗಿ ಕೂಡಲೇ ಕೆರೆಯಿಂದ ಹೊರತೆಗೆದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಮೃತರಾಗಿದ್ದರು.
