
ಕಳಸ ಲೈವ್ ವರದಿ
ಡಿ.ವಿ ಸಂಜಯ್ . ಪತ್ರಕರ್ತ ಚಿಕ್ಕಮಗಳೂರು
ಸಿನಿಮಾಗಳು ಕಡಿಮೆ ಪ್ರಮಾಣದಲ್ಲಿ ತೆರೆ ಕಾಣುತಿರುವಾಗ ಸಿನಿಮಾ ಮಂದಿರಗಳೀಗೆ ಜನರು ಸುಳಿಯುತಿಲ್ಲ ಎನ್ನುತಿರುವ ಸಮಯದಲ್ಲಿ
ಸು ಪ್ರಮ್ ಸೋ…ಸುಲೋಚನ ಫ್ರಮ್ ಸೋಮೇಶ್ವರ ಹೀಗೊಂದು ಹೆಸರಿನ ಈ ಕಾಲಘಟ್ಟದಲ್ಲಿ ಅತ್ಯತಮ ಕಥೆಯ ಆಶ್ಲೀಲತೆ ಇಲ್ಲದ, ಹೃದಯ ಸ್ಪರ್ಶಿ ಹಾಸ್ಯ ಭರಿತ ಸಿನಿಮಾ ಬಂದಿದೆ.
ಮಲೆನಾಡು ಭಾಗದಲ್ಲಿ ಕೊಂಚ ಕೆಲಸದ ಒತ್ತಡ ಮಳೆ ಹೀಗೆಲ್ಲ ಅಂದುಕೊಂಡು ಜನ ಚಿತ್ರ ಮಂದಿರಕ್ಕೆ ತೆರಳುವುದು ಕಡಿಮೆಯೆ ಅದರೆ ಮೊನ್ನೆ
ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿ ಸಾಗುತ್ತಿದಾಗ ನಾಗಲಕ್ಷ್ಮೀ ಚಿತ್ರ ಮಂದಿರದ ಎದುರು 2 ಸಾಲಿನಲ್ಲಿ ಜನರು ಟಿಕೇಟ್ ಖರೀದಿಗೆ ನಿಂತಿದ್ದರು. ಸೋನೆ ಮಳೆ ಗಾಳಿ ಇದ್ದರು
ಕೂಡ ಮಹಿಳೆಯರು ಯುವಕರು ಅಲ್ಲಲಿ ವಯಸ್ಕರರು ಚಿತ್ರ ಮಂದಿರದ ಸುತ್ತ ಮುತ್ತ ಕಂಡು ಬಂದರು. ಬಾಲ್ಕನಿ ಭರ್ತಿಯಾಗಿದೆ ಎಂಬ ನಾಮ ಫಲಕ ಕೂಡ ಇರಿಸಲಾಗಿತ್ತು.
ಸಿನಿಮಾ ಮಂದಿರದ ಗೇಟ್ ಒಳಗೆ ಹಾಗು ಹೊರಗೆ ವಾಹಗಳು ನಿಂತಿದರಿಂದ ಸಿನಿಮಾ ಮಂದಿರ ಬಹುತೇಕ ತುಂಬಿದೆ ಎಂಬುದು ಖಾತ್ರಿಯಾಗಿತ್ತು.
ಚಿತ್ರದ ನಾಮ ಫಲಕ ಗಮನಿಸಿದಾಗ ಸು ಫ್ರಮ್ ಸೋ ಹೆಸರಿನ ಸಿನಿಮಾದ ಬಿತ್ತಿ ಚಿತ್ರ ಕಾಣಿಸಿತ್ತು. ಇದಕ್ಕು ಮುನ್ನ ನಮ್ಮ ಜಿಲ್ಲೆಯ ಬರಹಗಾರ್ತಿ ದೀಪ ಹಿರೇಗುತ್ತಿ ಅವರು ಕೂಡ
ಈ ಸಿನಿಮಾದ ಬಗ್ಗೆ ಉತ್ತಮ ಸಂದೇಶವನ್ನು ಬರೆದು ಹಂಚಿಕೊಂಡಿದ್ದರು ಅಲ್ಲಿ ಇದರ ಬಗ್ಗೆ ಓದಿದ ನನ್ನಗೆ ಮತ್ತಷ್ಟು ಕುತೂಹಲ ಹೆಚ್ಚಿ ಸಂಜೆ 5 -30 ರ ಪ್ರದರ್ಶನಕ್ಕೆ ನಾನು ನನ್ನ ಮಿತ್ರ ತೆರಳಿದೆವು.
ಆ ಸಮಯದಲ್ಲಿ ಕೂಡ ಬಾಲ್ಕನಿ ಟಿಕೇಟ್ ಸಿಗದೆ 2ನೇ ತರಗತಿ ಟಿಕೇಟ್ ಸಿಕ್ಕು ಸಿನಿಮಾ ವೀಕ್ಷಣೆ ಮಾಡಿ ಹೊರ ಬಂದೆವು ರಾತ್ರಿ 8-30 ರ ಶೋ ಗೆ ಕೂಡ ಚಿತ್ರ ಮಂದಿರದ ಎದುರು ಜನ ಜಂಗುಳಿ ನೆರೆದಿತ್ತು.
ಸಿನಿಮಾ ಈ ಮಟ್ಟದಕ್ಕೆ ಮನೋರಂಜನೆ ಕೊಡುವಾಗ ಜನರು ಬರುವುದು ಸಹಜ ಬಿಡಿ.
ಸಿನಿಮಾ ಆರಂಭದಿಂದ ಅಂತ್ಯದವರೆಗು ಅದರಲ್ಲಿ ಬರುವ ಸನ್ನಿವೇಶಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಸಾಮಾನ್ಯ ಜನರ ಬದುಕಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ
ನಡೆಯುವ ವಿಚಾರಗಳನ್ನೆ ಇಟ್ಟುಕೊಂಡು ಜನರೀಗೆ ಸಿನಿಮಾ ಮೂಲಕ ತಲುಪಿಸುವ ಪ್ರಮಾಣಿಕ ಪ್ರಯತ್ನವನ್ನು ಚಿತ್ರ ತಂಡ ಮಾಡಿದೆ. ಒಂದು ಉತ್ತಮ ಚಲನಚಿತ್ರ ಎಂದರೆ ಪ್ರೇಕ್ಷಕ ಚಿತ್ರ ನೋಡಿ
ಸಿನಿಮಾ ಮಂದಿರದಿಂದ ಹೊರ ಬಂದರೆ ಅಲ್ಲಿನ ಸನ್ನಿವೇಶಗಳು ಕೆಲ ದಿನ ಮತ್ತೆ ಮತ್ತೆ ನೆನಪಾಗುವಂತಿರಬೇಕು ಮತ್ತೊಮೆ ಸಿನಿಮಾ ನೋಡಬೇಕೆನಿಸಬೇಕು. ಅಲ್ಲಿನ ಕಥೆ ದೃಶ್ಯಗಳು ಪಾತ್ರಗಳು
ಪದೆ ಪದೆ ಅಲ್ಲಿನ ಕಥೆ ಕಾಡಬೇಕು ಈ ಸಿನಿಮಾ ಅವೆಲ್ಲವನ್ನು ಮಾಡುತ್ತದೆ. ಈ ಸಿನಿಮಾದ ನಿರ್ದೇಶಕ ಜೆ.ಪಿ ತೊಮಿನಾಡು ಅವರನ್ನು ಈ ಮೊದಲೆ ಸಾಕಷ್ಟು ತುಳು ಹಾಗು ಕನ್ನಡ ನಾಟಕಗಳಲ್ಲಿ ನೋಡಿದೆ. ಹಲವು ರೀತಿ ಪಾತ್ರಗಳನ್ನು ಅತ್ಯುತಮವಾಗಿ
ನಿಭಾಯಿಸುತಿದ್ದರು. ಕೆಲವೊಂದು ನಾಟಕದ ಕಿರು ಪಾತ್ರದಲ್ಲಿ ಕಾಣಿಸಿಕೊಂಡಿದಾರೆ ಆದರೆ ಅವರೊಳೆಗೆ ಇಂತಹ ಒಬ್ಬ ಬರಹಗಾರ ನರ್ದೇಶಕ ಇದ್ದಾರೆ ಎಂಬುದು ಈ ಸಿನಿಮಾ ಮೂಲಕ ತಿಳಿಯಿತು.
ಮೊದಲೆ ಹೇಳಿದಂತೆ ಸಂಪೂರ್ಣ ಹಾಸ್ಯ ಮಿಶ್ರಿತ ಸಿನಿಮಾ ಆದರು ಒಂದು ಮೌನ, ಗಾಂಭಿರ್ಯತೆ ಇದೆ. ಕೆಲ ಮನಸುಗಳ ಬಾವನೆ ಇದೆ ಬದುಕಿನ ನೋವಿದೆ. ಈ ಎಲ್ಲಾ
ವಿಚಾರಗಳು ಒಂದೇ ಕಥೆಯಲ್ಲಿ ಬರುವಂತೆ ಸುಂದರವಾಗಿ ಕಥೆ ಬರೆದು ತಾವು ಕೂಡ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಮಾವನ್ನು ಜನರ ಮನಸಿನ ಹತ್ತಿರಕ್ಕೆ ತಂದಿರುವವರು ಜೆ.ಪಿ ತೊಮಿನಾಡು . ಹಾಗೆ ಸಿನಿಮಾದಲ್ಲಿ ನಟನೆ ಮಾಡಿರುವ
ಕಲಾವಿದರಾದ ರಾಜ್. ಬಿ ಶೆಟ್ಟಿ, ದೀಪಕ್ ರೈ, ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್, ಪುಷ್ಪರಾಜ್, ಭಾವನಾತ್ಮಕವಾಗಿ ಪಾತ್ರ ನಿರ್ವಹಿಸಿರುವ ಸಂಧ್ಯಾ ಅರಕೆರೆ ಸೇರಿ ಎಲ್ಲಾ ಕಲಾವಿದರು ಸಿನಿಮಾದ ಗೆಲುವಿಗೆ ಕಾರಣರಾಗಿದಾರೆ.
ಇಷ್ಟು ಮಾತ್ರವಲ್ಲ ಸಿನಿಮಾ ಕಥೆ ಮಾಡುವುದು ಸರಿ ಅದನ್ನು ನಿರ್ಮಾಣ ಮಾಡಿ ಜನರೀಗೆ ತಲುಪಿಸುವ ಕೆಲಸ ಮಾಡಿರುವ ನಮ್ಮ ಚಿಕ್ಕಮಗಳೂರು ಜಿಲ್ಲೆಯವರೆ ಆದ ರವಿ ರೈ ಕಳಸ, ಉಳಿದಂತೆ ರಾಜ್ ಬಿ.ಶೆಟ್ಟಿ, ಶಶಿಧರ ಶೆಟ್ಟಿ ಬರೋಡ
ಎಲ್ಲರಿಗು ಪ್ರೇಕ್ಷಕರ ಪರವಾಗಿ ಧನ್ಯವಾದಗಳು. ಕಾರಣ ಕನ್ನಡ ಸಿನಿಮಾ ಉಳಿಯಲು ಬೆಳೆಯಲು ಇವರ ಶ್ರಮ ಅಮೂಲಾಗ್ರವಾದದು. ಸಿನಿಮಾ ಯಾರೇ ಮಾಡಲಿ ಅದರ ಕಥೆ, ಒಳಗಿರುವ ವಿಚಾರ
ಹಾಗು ಭಿನ್ನತೆ ಇದಾಗ ಯಾರೋ ಕೂಗಾಡಿ ಕಿರುಚಾಡಿ ಸಿನಿಮಾ ಬಗ್ಗೆ ಮಾತಾಡುವುದೆ ಬೇಡ ಅದೇ ತನ್ನತ್ತ ಸೆಳೆದು ಪ್ರೇಕ್ಷಕರು ಬರುವಂತೆ ಮಾಡುತ್ತದೆ. ಅದಕ್ಕೆ ಈ ಹಿಂದೆ ಬಂದಿರುವ ಆನೇಕ ಸಿನಿಮಾಗಳು
ಈ ಸಿನಿಮಾ ಕೂಡ ಸಾಕ್ಷಿ. ನಿಜಕ್ಕು ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತದೆ ಮತ್ತಷ್ಟು ಪ್ರೇಕ್ಷಕರಿಂದ ತುಂಬಿದ ಪ್ರದರ್ಶನ ಕಾಣುತ್ತದೆ.