ಕಳಸ ಲೈವ್ ವರದಿ
ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಕಳಸಕ್ಕೆ ಬೇಟಿ ನೀಡಿದ್ದಾರೆ. ಶನಿವಾರ ಬೆಳಿಗ್ಗೆಯೇ ಕಳಸಕ್ಕೆ ಆಗಮಿಸಿದ ಎನ್ಐಎ ಅಧಿಕಾರಿಗಳ ತಂಡ ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮೇ ತಿಂಗಳ 1ರಂದು ಬಜಪೆಯ ಕಿನ್ನಿಪದವು ಎಂಬಲ್ಲಿ ಸುಹಾಶ್ ಶೆಟ್ಟಿ ಹತ್ಯೆಯಾಗಿತ್ತು.ಈ ಪ್ರಕರಣದಲ್ಲಿ 12 ಮಂದಿಯನ್ನು ಬಂಧಿಸಲಾಗಿತ್ತು. ಅದರಲ್ಲಿ ಕಳಸದ ರಂಜಿತ್ ಮತ್ತು ನಾಗರಾಜ್ ಇಬ್ಬರು ವ್ಯಕ್ತಿಗಳು ಕಳಸದವರಾಗಿದ್ದರು.
ಈ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್ಐಎ ತನಿಖೆಗೆ ವಹಿಸಿರುವ ಕಾರಣ. ತನಿಖೆಯ ಅಂಗವಾಗಿ ಎನ್ಐಎ ತಂಡ ಶನಿವಾರ ಆರೋಪಿಗಳಾದ ನಾಗರಾಜ್ ಮತ್ತು ರಂಜಿತ್ ಮನೆಗೆ ಎನ್ಐಎ ತಂಡ ಬಂದು ಪರಿಶೀಲಿಸಿದೆ. ಆರೋಪಿಗಳಿಬ್ಬರು ಬೆಂಗಳೂರು ಪರಪ್ಪನ ಅಗಹಾರದಲ್ಲಿದ್ದಾರೆ.
