
ಕಳಸ ಲೈವ್ ವರದಿ
ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಅತ್ಯಂತ ಕಡಿಮೆ ಬೆಲೆಯ ಆರೋಗ್ಯ ಮತ್ತು ಅಪಘಾತ ವಿಮಾ ಸೌಲಭ್ಯಗಳಿದ್ದು ಅದನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸ್ಟೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರಂಗಸ್ವಾಮಿ ಹೇಳಿದರು.
ಕಳಸ ಸ್ಟೇಟ್ ಬ್ಯಾಂಕ್ನಲ್ಲಿ ಇಬ್ಬರು ಗ್ರಾಹಕರು ಅಪಘಾತ ಮತ್ತು ಆರೋಗ್ಯ ಸಮಸ್ಯೆಯಿಂದ ಮರಣ ಹೊಂದಿದ್ದರು.ಇವರ ಕುಟುಂಬಕ್ಕೆ ತಲಾ ಎರಡು ಲಕ್ಷ ಚೆಕ್ ವಿತರಿಸಿ ಮಾತನಾಡಿದ ಅವರು ವರುಷಕ್ಕೆ 100 ರೂ ನಂತೆ ಹೊರನಾಡು ಉಮೇಶ್ ಎಂಬುವವರು ಬ್ಯಾಂಕ್ ನಲ್ಲಿ ಪ್ರೀಮಿಯಂ ಮಾಡಿದ್ದರು. ಅವರು ಬೈಕ್ ಅಪಘಾತದದಲ್ಲಿ ಮರಣ ಹೊಂದಿದ್ದರು.ಹಾಗೆಯೆ ಕಳಕೋಡು ಸುಬ್ರಹ್ಮಣ್ಯ ಎಂಬುವವರು ವರ್ಷಕ್ಕೆ 436 ರೂ ಪ್ರೀಮಿಯಂ ಮಾಡಿದ್ದರು ಅವರು ಆರೋಗ್ಯ ಸಮಸ್ಯೆಯಿಂದ ಮರಣ ಹೊಂದಿದ್ದರು.ಇಬ್ಬರಿಗೂ ತಲಾ ಎರಡು ಲಕ್ಷದಂತೆ ವಿಮೆಯನ್ನು ಅವರ ಕುಟುಂಬಕ್ಕೆ ನೀಡಲಾಗಿದೆ.
ಇದು ಅತ್ಯಂತ ಕಡಿಮೆಯ ಪ್ರೀಮಿಯಂನಲ್ಲಿ ನೀಡುವ ವಿಮೆಯಾಗಿದೆ.ಹಾಗೆಯೆ ಈಗ ವಾರ್ಷಿಕ 2000ರೂ ಕಟ್ಟಿ ಪ್ರೀಮಿಯಂ ಮಾಡಿಸಿಕೊಂಡಲ್ಲಿ ಆಕಸ್ಮಿಕ ಅವಘಡದಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 40ಲಕ್ಷ ನೀಡಲಾಗುತ್ತದೆ. ಈ ಸೌಲಭ್ಯವನ್ನು ಗ್ರಾಹಕರು ಬಳಸಿಕೊಳ್ಳಿ ಹೆಚ್ಚಿನ ವಿವರ ಬೇಕಾದಲ್ಲಿ ನಿಮ್ಮ ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಎಜಿಎಂ ರವಿ, ಕಳಸ ಬ್ಯಾಂಕ್ ವ್ಯವಸ್ಥಾಪಕ ಸುಬ್ರಹ್ಮಣ್ಯ, ಗಿರೀಶ್, ನರೇಂದ್ರ, ಸುಮುಖ, ಸುಹಾಸ್, ರಾಹುಲ್ ಇತರರು ಇದ್ದರು.
ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ: ಸುಬ್ರಹ್ಮಣ್ಯ ಎಸ್ಬಿಐ ಕಳಸ ಬ್ರಾಂಚ್ ವ್ಯವಸ್ಥಾಪಕರು 9482822107


