
ಕಳಸ ಲೈವ್ ವರದಿ
ಪ್ರಪ್ರಥಮವಾಗಿ ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಮಂತ್ರಾಲಯದಲ್ಲಿ ನಡೆಯಲಿದ್ದು ಈ ಸಮ್ಮೇಳನದಲ್ಲಿ ಕನ್ನಡ ಸಿರಿ ಪ್ರಶಸ್ತಿಗೆ ಕಳಸ ಅ.ರಾ.ಸತೀಶ್ಚಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ನಾಡೋಜ ಮಹೇಶ್ ಜೋಶಿ ಅವರು ಒಳಗೊಂಡAತೆ ತೆಲಂಗಾಣದ ರಾಜ್ಯಾಧ್ಯಕ್ಷರಾದ ಡಾ. ಗುಡಗುಂಟಿ ವಿಠಲ. ಆಂಧ್ರಪ್ರದೇಶದ ರಾಜ್ಯಾಧ್ಯಕ್ಷರಾದ ಆಂಜನ್ ಕುಮಾರ್. ಮಹಾರಾಷ್ಟ್ರದ ಅಧ್ಯಕ್ಷರಾದ ಸೋಮಶೇಖರ್ ಜಮಶೆಟ್ಟಿ, ಗೋವಾ ಅಧ್ಯಕ್ಷರಾದ ಸಿದ್ದಣ್ಣ ಮೇಟಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಸೂರಿ ಶ್ರೀನಿವಾಸ ಇವರುಗಳ ಸಂಪೂರ್ಣ ಸಹಕಾರ ಹಾಗೂ ಜಂಟಿ-ನೇತೃತ್ವದಲ್ಲಿ ಇದೇ ತಿಂಗಳು ಶುಕ್ರವಾರ 22ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಪ್ರಪ್ರಥಮ ಅಂತರ-ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಂಧ್ರಪ್ರದೇಶದ ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಕನ್ನಡ ಸಿರಿ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷತರಾಗಿರುವ ಅ.ರಾ.ಸತೀಶ್ಚಂದ್ರ ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, 1999ರಲ್ಲಿ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗಿ, ಮಲೆನಾಡ ಮಡಿಲಿನಿಂದ, ಏಕೆ ಹೀಗೆ ನಮ್ಮ ನಡುವೆ, ಅನುಪಮ,ಸುಕನ್ಯಾ, ಮಾಯಾದಿ,ನಾವು ನಮ್ಮ ಹೆಂಡತಿಯರು, ಚರಣದಾಸಿ, ಶಾಂತಮ್ ಪಾಪಂ, ಮಿಥುನ ರಾಶಿ, ಗಂಗೆ ಗೌರಿ ದಾರವಾಹಿಗಳಲ್ಲಿ ನಟನೆ.
ಮಲೆನಾಡ ಮಡಿಲಿನಿಂದ, ಹಸಿರು ತೋರಣ, ಸಸ್ಯ ಪುಷ್ಕರಣಿ, ಶಂಕರಾಚಾರ್ಯ ಮತ್ತು ಕರ್ಣ, ಏಕೆ ಹಿಗೇ ನಮ್ಮ ನಡುವೆ, ಮಾಯಾವಿ ದಾರವಾಹಿಗಳಿಗೆ ಕಲಾ ನಿರ್ಧೇಶನ ನೀಡಿದ್ದಾರೆ.ನನಗೆ ನೀನು ನಿನಗೆ ನಾನು ಚಲನಚಿತ್ರಕ್ಕೆ ಗೀತಾ ರಚನೆ, ಕಳಸ ಗಿರಿಜಾ ಕಲ್ಯಾಣ ಉತ್ಸವದ ಕಿರು ಚಿತ್ರ ನಿರ್ಮಿಸಿ ಚಂದನದಲ್ಲಿ ಪ್ರಸಾರ, ಸಹಕಾರಿ ಸಿರಿ ಹೊನ್ನೆ ಸ್ಮರಣ ಸಂಚಿಕೆಯ ವಿನ್ಯಾಸ ಮತ್ತು ಸಂಪಾದಕರಾಗಿ, ಸ್ಮೃತಿ ಸ್ಮರಣ ಸಂಚಿಕೆ ಸಹ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಸಾಹಿತ್ಯ, ಕಲೆ, ನಟನೆ, ನಿರ್ದೇಶಕ, ಬರಹಗಾರ, ಗೀತಾ ರಚನೆ, ಅಲ್ಲದೆ ಪ್ರಸ್ತುತ ಕಳಸ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಉತ್ತಮ ಸಂಘಟನೆಯೊAದಿಗೆ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಸಾಹಿತ್ಯ ಪರಿಷತ್ತಿಗೆ ನೀಡಿದ ಸಾಕಷ್ಟು ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.