
ಕಳಸ ಲೈವ್ ವರದಿ
ನಾನು ನಕಲಿ ವೈದ್ಯನಲ್ಲ ಕ್ಲಿನಿಕ್ ನಡೆಸಲು ಬೇಕಾದ ಎಲ್ಲಾ ದಾಖಲಾತಿಗಳು ಇದ್ದರೂ ಕೂಡ ದುರುದ್ದೇಶ ಪೂರ್ವಕವಾಗಿ ಹಿರೇಬೈಲು ಗ್ರಾಮದಲ್ಲಿದ್ದ ಸ್ಪಂದನ ಪಾಲಿಕ್ಲಿನಿಕ್ ಗೆ ಮೂಡಿಗೆರೆ ತಾಲ್ಲೂಕು ವೈದ್ಯಾಧಿಕಾರಿಗಳು ಬೀಗ ಹಾಕಿದ್ದಾರೆ ಎಂದು ಇಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲೇಶ ನಾಯ್ಕ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಹಿರೇಬೈಲು ಸ್ಪಂದನಾ ಕ್ಲಿನಿಕ್ನ್ನು ಕೆ.ಎಂ.ಸಿ ನೋಂದಿತ ವೈದ್ಯರು ಇಲ್ಲದಿರುವುದು, ದರ ಪಟ್ಟಿ ಲಗತ್ತಿಸದೆ ಇರುವುದು, ಅನ್ಯ ರೀತಿಯ ಪ್ರಕಾರದ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವುದು, ಜೈವಿಕ ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಮಾಡದೆ ಇರುವುದು ಇಲ್ಲಿ ಕಂಡು ಬಂದಿದ್ದು, ಕೆ.ಪಿ.ಎಂ.ಇ ಕಾಯ್ದೆಗಳು ಇಲ್ಲಿ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲ್ಲೂಕು ವೈದ್ಯಾಧಿಕಾರಿಗಳು ಕ್ಲಿನಿಕನ್ನು ಬಂದ್ ಮಾಡಿಸಿದ್ದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅಂದು ಕ್ಲಿನಿಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲೇಶ ನಾಯ್ಕ, ನಮ್ಮತ್ರ ಸ್ಪಂದನಾ ಕ್ಷಿನಿಕ್ ನಡೆಸಲು ಎಲ್ಲಾ ದಾಖಲಾತಿಗಳು ಇತ್ತು.ಅದನ್ನು ತೋರಿಸಿದರೂ ಕೂಡ ಅದನ್ನು ನೋಡದೆ ಏಕಾ ಏಕಿ ಕ್ಲಿನಿಕ್ಗೆ ಬಂದು ಬೀಗ ಹಾಕಿದ್ದಾರೆ. ನಾವು ಒಂದು ವೇಳೆ ನಕಲಿಗಳು ಆಗಿದ್ದರೆ ನಮ್ಮ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿತ್ತು. ಅದನ್ನು ಅವರು ಮಾಡಿಲ್ಲ.
ಇದು ಕೆಲವರ ಕುಮ್ಮಕ್ಕಿನಿಂದ ನಡೆದಿದೆ.ಇದರಿಂದ ನಮಗೆ ಅನ್ಯಾಯವಾಗಿದೆ ಆದ್ದರಿಂದ ನಾವು ನಮ್ಮ ಕ್ಲಿನಿಕ್ ಮುಚ್ಚಲು ಯರ್ಯಾರು ಬಂದಿದ್ದಾರೋ ಅವರೆಲ್ಲರ ಮೇಲೂ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ಲಿನಿಕ್ನಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೀತಿ ಮಾತನಾಡಿ ನನ್ನ ಬಳಿಯು ನಾನು ನರ್ಸ್ಗಿ ಕರ್ತವ್ಯ ನಿರ್ವಹಿಸಲು ಬೇಕಾದ ಎಲ್ಲಾ ದಾಖಲಾತಿಗಳು ಕೂಡ ಇದೆ.ಆದರೆ ಅದನ್ನು ಕೂಡ ನೋಡಿಲ್ಲ.ನಮ್ಮ ಹೊರಗೆ ಬರಲು ಹೇಳಿ ಬೀಗ ಹಾಕಿದ್ದಾರೆ.ಈ ಸಂದರ್ಭದಲ್ಲಿ ರೋಗಿಗಳು ಕೂಡ ಇದ್ದರು.ಈ ಭಾಗದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಕೂಡ ಇಲ್ಲಿ ವೈದ್ಯರಿಲ್ಲ.ಅಲ್ಲಿಗೆ ವೈದ್ಯರನ್ನು ನೇಮಕ ಮಾಡುವುದನ್ನು ಬಿಟ್ಟು ನ್ಯಾಯಯುತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗೂ ಬೀಗ ಹಾಕಿದ್ದಾರೆ ಎಂದು ದೂರಿದ್ದಾರೆ.