
ಕಳಸ ಲೈವ್ ವರದಿ
ಕಳೆದ ಜುಲೈ ತಿಂಗಳಲ್ಲಿ ಪೊಲೀಸರಿಗೆ ಸಿಗದೆ ಪರಾರಿ ಆಗಿದ್ದ ದನಕಳ್ಳರನ್ನು ಇಲ್ಲಿನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.. ಜುಲೈ 10ರಂದು ಕಳಸ-ಹೊರನಾಡು ರಸ್ತೆಯ ದಾರಿಮನೆ ಬಳಿಜಾನುವಾರು ಸಾಗಿಸುವ ವಾಹನವನ್ನು ಪೊಲೀಸರು ಬೆನ್ನಟ್ಟಿದಾಗ ಕಳ್ಳರು ವಾಹನ ಬಿಟ್ಟು ಪರಾರಿ ಆಗಿದ್ದರು. ಆಗ ವಾಹನ ಮತ್ತು ನಾಲ್ಕುಜಾನುವಾರುಗಳನ್ನು ಕಳಸ ಪೊಲೀಸರು ವಶಪಡಿಸಿಕೊಂಡಿದ್ದರು.ಆ
ಪ್ರಕರಣದಲ್ಲಿ ಪರಾರಿ ಆಗಿದ್ದ ಕಳ್ಳರ ಪತ್ತೆಗೆ ಕಳಸ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಗಿರೀಶ್, ಶಿವಕುಮಾರ್, ನಿಖಿಲ್, ಸಿದ್ದಪ್ಪ ಕರಂಡಿ, ಪ್ರಮೋದ್, ವಿನಯ್ ಸತತ ಕಾರ್ಯಾಚರಣೆ ನಡೆಸಿದ್ದರು. ಭದ್ರಾವತಿ ಮೂಲದ ಸಲ್ಮಾನ್ ಖಾನ್ (21), ಸಾಹಿಲ್ (21) ಸಯ್ಯದ್ ತೌಫೀಖ್ (32),ಅಬ್ದುಲ್ ಅಜೀಜ್ (34) ಮತ್ತು ಅಬ್ದುಲ್ (22) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಎಲ್ಲ ಆರೋಪಿಗಳು ಚಿಕ್ಕಮಗಳೂರು ಜಿಲ್ಲೆ, ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆ, ಹಾವೇರಿ ಜಿಲ್ಲೆ, ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದನಕಳ್ಳತನ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿರುತ್ತದೆ. ಆರೋಪಿಗಳು ಪದೇ ಪದೇ ದನಕಳ್ಳತನ ಮಾಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಆರೋಪಿಗಳಿಂದ ದನಕಳ್ಳತನ ಮಾಡಲು ಬಳಸಿದ್ದ ಮಹಿಂದ್ರಾ ಸ್ಟೈಲೋ ಕಾರ್ ಹಾಗೂ ನಾಲ್ಕು ದನಗಳನ್ನು ವಶಪಡಿಸಿಕೊಂಡಿರುತ್ತದೆ. ಹಾಗೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.