
ಕಳಸ ಲೈವ್ ವರದಿ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಡೆಸಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ 4ನೇ ವರ್ಷದ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ ಯಲ್ಲಿ
ಕಳಸ ಕೆ ಪಿ ಎಸ್ ಶಾಲೆಯ 10 ನೇ ತರಗತಿಯ ಕು. ಸವಿದ್ ಪಿ ಜೈನ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಳಸ ತಾಲ್ಲೂಕಿನಿಂದ 40 ವಿಧ್ಯಾರ್ಥಿಗಳು ಈ ಬಾರಿ ಸ್ಪರ್ಧಿಸಿದ್ದರು.
ಕು. ಸವಿದ್ ಪಿ ಜೈನ್ ,ಕಡೆಪಾಲ್ ಪ್ರದೀಪ್ ಕುಮಾರ್ ಜೈನ್ ಮತ್ತು ದಿವ್ಯಾ ಅವರ ಪುತ್ರ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಕೆ ಜೆ ವಿ ಎಸ್ ಜಿಲ್ಲಾ ಸಂಯೋಜಕರಾದ ಶ್ರೀ ಸಂದೇಶ್, ಕಳಸ ತಾಲೂಕು ಕೆ ಜೆ ವಿ ಎಸ್ ಅಧ್ಯಕ್ಷರಾದ ಗಣೇಶ್ ಕುಕ್ಕೋಡು, ಶಾಲೆಯ ಉಪ ಪ್ರಾಂಶುಪಾಲರಾದ ಸುರೇಶ್ ಶಿಕ್ಷಕರಾದ ಶಿವಪ್ಪ, ಆನಂದ ವಿದ್ಯಾರ್ಥಿಯನ್ನು ಅಭಿನಂದಿಸಿದರು.