
ಕಳಸ ಲೈವ್ ವರದಿ
ಮಂತ್ರಾಲಯದಲ್ಲಿ ನಡೆದ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಳಸ ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಕನ್ನಡ ಸಿರಿ ಪ್ರಶಸ್ತಿ ಸ್ವೀಕರಿಸಿದರು. ಅಲ್ಲದೆ ಇದೇ ವೇದಿಕೆಯಲ್ಲಿ ಕವಿ, ಬರಹಗಾರ ಯೋಗಪಟು ವೈ ಪ್ರೇಂ ಕುಮಾರ್ ಬಹುಬಾಷಾ ಕವಿಗೋಷ್ಠಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿ ಕವನ ವಾಚನ ಮಾಡಿದರು.
ಶುಕ್ರವಾರ ನಡೆದ ಒಂದು ದಿನದ ಈ ಸಮ್ಮೇಳನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ನಾಡೋಜ ಮಹೇಶ್ ಜೋಶಿ ತೆಲಂಗಾಣದ ರಾಜ್ಯಾಧ್ಯಕ್ಷರಾದ ಡಾ. ಗುಡಗುಂಟಿ ವಿಠಲ. ಆಂಧ್ರಪ್ರದೇಶದ ರಾಜ್ಯಾಧ್ಯಕ್ಷರಾದ ಆಂಜನ್ ಕುಮಾರ್. ಮಹಾರಾಷ್ಟ್ರದ ಅಧ್ಯಕ್ಷರಾದ ಸೋಮಶೇಖರ್ ಜಮಶೆಟ್ಟಿ, ಗೋವಾ ಅಧ್ಯಕ್ಷರಾದ ಸಿದ್ದಣ್ಣ ಮೇಟಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಸೂರಿ ಶ್ರೀನಿವಾಸ ಇವರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷÀರಾಗಿರುವ ಅ.ರಾ.ಸತೀಶ್ಚಂದ್ರ ಸಾಹಿತ್ಯ, ಕಲೆ, ನಟನೆ, ನಿರ್ದೇಶಕ, ಬರಹಗಾರ, ಗೀತಾ ರಚನೆ, ಅಲ್ಲದೆ ಪ್ರಸ್ತುತ ಕಳಸ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಉತ್ತಮ ಸಂಘಟನೆಯೊAದಿಗೆ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಸಾಹಿತ್ಯ ಪರಿಷತ್ತಿಗೆ ನೀಡಿದ ಸಾಕಷ್ಟು ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.