
ಕಳಸ ಲೈವ್ ವರದಿ
ಕಳಸ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾ ಪೂಜಾ ಮಹೋತ್ಸವದಲ್ಲಿ ಸವಿತ ಸಮಾಜದ ಸದಸ್ಯರು ದೇವರಿಗೆ ವಿಶೇಷ ಹಸಿರುಹೊರೆ ಕಾಣಿಕೆ ಸಲ್ಲಿಸಿ ಭಕ್ತಿಯ ಸಂಕೇತವನ್ನು ತೋರಿಸಿದರು.
ಸಮಾಜದ ಅಧ್ಯಕ್ಷರು ಸದಸ್ಯರು ಮಹಿಳಾ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು ಈ ವಿಶೇಷ ಸಮರ್ಪಣೆಯಲ್ಲಿ ಭಾಗವಹಿಸಿದರು.ಅಕ್ಕಿ, ಬೇಳೆ, ಕಾಳು, ತರಕಾರಿ, ಬೆಲ್ಲ ಇನ್ನಿತರೆ ದಿನ ಬಳಕೆಯ ಸಾಮಾಗ್ರಿಗಳನ್ನು ದೇವರಿಗೆ ಸಲ್ಲಿಸಿದರು.
ನವರಾತ್ರಿಯ ಸಂಭ್ರಮದಲ್ಲಿ ಕಳಸ ಶ್ರೀ ದುರ್ಗಾದೇವಿಗೆ ಹಸಿರುಹೊರೆ ಸಮರ್ಪಿಸುವ ಈ ಭಕ್ತಿಪೂರ್ಣ ಕಾರ್ಯಕ್ರಮವು ಸಮಾಜದ ಒಗ್ಗಟ್ಟಿನ ಮತ್ತು ಧಾರ್ಮಿಕ ಪರಂಪರೆಯ ಮಹತ್ವವನ್ನು ಜನಸಾಮಾನ್ಯರ ಮುಂದೆ ಮೆರೆದಿದೆ.