
ಕಳಸ ಲೈವ್ ವರದಿ
ದುರ್ಗಾ ಪೂಜೆಯನ್ನು ಮಾಡುವುದರಿಂದ ನಮ್ಮಲ್ಲಿರುವ ರಾವಣನತ್ವ ಹೋಗಿ ರಾಮನ ತತ್ವಗಳನ್ನು ಅಳವಡಿಕೊಳ್ಳಲು ದುರ್ಗಾಮಾತೆ ದಾರಿ ಮಾಡಿಕೊಡುತ್ತಾಳೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ರಾಜಗೋಪಾಲ ಜೋಷಿ ಹೇಳಿದರು.
ಕಳಸದಲ್ಲಿ ನಡೆಯುತ್ತಿರುವ ೩೭ನೇ ವರ್ಷದ ಶ್ರೀದುರ್ಗಾಪೂಜಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮತನಾಡಿದ ಅವರು ಮನುಷ್ಯನಲ್ಲಿ ರಾಮನೂ ಇದ್ದಾನೆ ರಾವಣನೂ ಇದ್ದಾನೆ.ನಾವು ನಮ್ಮಲ್ಲಿ ಯಾವುದಕ್ಕೆ ಹೆಚ್ಚು ಒತ್ತು ಕೊಡುತ್ತೇವೆಯೋ ಅದು ನಮ್ಮಲ್ಲಿ ಹೆಚ್ಚುತ್ತಾ ಹೋಗುತ್ತದೆ.ನಮ್ಮಲ್ಲಿರುವ ರಾವಣನತ್ವವನ್ನು ಬದಿಗಿಟ್ಟು ರಾಮ ತತ್ವಗಳನ್ನು ಅದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದಾಗ ನಮ್ಮ ಜೀವನ ಸುಖಮಯವಾಗುತ್ತದೆ.ಸಾರ್ಥಕತೆಯತ್ತ ಸಾಗುತ್ತದೆ.ಅದಕ್ಕೋಸ್ಕರ ಇಂತಹ ದುರ್ಗಾಪೂಜೆಂತಹ ಕಾರ್ಯಕ್ರಮಗಳು ಬೇಕು ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ ಹಳುವಳ್ಳಿ ಇವರಿಂದ ಮಹಿಷ ಮರ್ದಿನಿ ಯಕ್ಷಗಾನ ನಡೆಯಿತು.