
ಕಳಸ ಲೈವ್ ವರದಿ
ಕಳಸದ ಕೆಕೆ ಬಾಲಕೃಷ್ಣ ಭಟ್ ಅವರ ಸಾಯಿ ಮಂದಿರದಲ್ಲಿ ಕಳೆದ 17 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ನವರಾತ್ರಿಯ ಗೊಂಬೆಗಳ ಪ್ರದರ್ಶನ ಭಕ್ತರ ಆಕರ್ಷಣೆಯ ಕೇಂದ್ರಬಿAದುವಾಗಿದೆ. ಧಾರ್ಮಿಕ ಭಾವನೆ, ಕಲೆ ಮತ್ತು ಸಂಸ್ಕೃತಿಯ ಸಂಗಮವಾಗಿ ಬೆಳೆದಿರುವ ಈ ಪ್ರದರ್ಶನವು ಪ್ರತೀ ವರ್ಷ ವಿಭಿನ್ನ ಆಕರ್ಷಣೆಯನ್ನು ಪಡೆದುಕೊಳ್ಳುತ್ತಿದೆ.
17 ವರ್ಷಗಳ ಹಿಂದೆ ಸಣ್ಣ ಪ್ರಯತ್ನದಿಂದ ಪ್ರಾರಂಭವಾದ ಈ ಸಂಪ್ರದಾಯವು ಇಂದು ಸಾವಿರಾರು ಗೊಂಬೆಗಳ ಸೇರ್ಪಡೆಯೊಂದಿಗೆ ಭಕ್ತಿಭಾವ ಜೊತೆಗೆ ಕಲಾತ್ಮಕ ವೈಭವದಿಂದ ಕಂಗೊಳಿಸುತ್ತಿದೆ. ಪ್ರತೀ ವರ್ಷ ಗೊಂಬೆಗಳ ಮೂಲಕ ಪೌರಾಣಿಕ ಕಥೆಗಳು, ಧಾರ್ಮಿಕ ಪ್ರಸಂಗಗಳು ಹಾಗೂ ಸಮಾಜಮುಖಿ ಸಂದೇಶಗಳನ್ನು ಇಲ್ಲಿ ಜೀವಂತವಾಗಿ ಮೂಡಿಸಲಾಗುತ್ತಿದೆ.
ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಲೀಲಾ ಮುಂತಾದ ಪೌರಾಣಿಕ ಕಥೆಗಳ ಗೊಂಬೆಗಳ ಜೊತೆಗೆ ಸ್ವಚ್ಛ ಭಾರತ, ಪರಿಸರ ಸಂರಕ್ಷಣೆ, ಕ್ರೀಡೆ, ಹಿಗೇ ಮುಂತಾದ ವಿಷಯಾಧಾರಿತ ದೃಶ್ಯಾವಳಿಗಳು ಈ ಪ್ರದರ್ಶನದ ವೈಶಿಷ್ಟ್ಯ. ಇದರಿಂದ ಭಕ್ತರಿಗೆ ಭಕ್ತಿ ಜೊತೆಗೆ ಸಮಾಜಮುಖಿ ಅರಿವು ಕೂಡ ಮೂಡುತ್ತಿದೆ.
“ಇದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಭಕ್ತಿಭಾವ ಬೆಳೆಸುವ ವೇದಿಕೆಯಾಗಿದೆ,” ಈ ಪ್ರದರ್ಶನವು ಅಕ್ಟೋಬರ್ 2ರ ತರಕ ಇರಲಿದ್ದು, ಕುಟುಂಬ ಸಹಿತರಾಗಿ ವೀಕ್ಷಣೆ ಮಾಡಬಹುದು ಹಾಗೇಯೆ ಈ ಬಾರಿ ಹಲವಾರು ಹೊಸ ಹೊಸ ಗೊಂಬೆಗಳ ಸೇರ್ಪಡೆಯ ಜೊತೆಗೆ ಹಂದಿಗೋಡು ಪೂರ್ಣಚಂದ್ರ ಅವರು ತೆಂಗಿನಕಾಯಿ ಗೆರಟೆಯಿಂದ ತಯಾರಿಸಿದ ಹಲವಾರು ಕಲಾಕೃತಿಗಳು ಗೊಂಬೆ ಪ್ರದರ್ಶನದ ಜೊತೆಯಲ್ಲಿ ಇಡಲಾಗಿದೆ ಎಂದು ಕೆ.ಕೆ.ಬಾಲಕೃಷ್ಣ ಭಟ್ ಹೇಳುತ್ತಾರೆ.