
ಕಳಸ ಲೈವ್
ಚಿಕ್ಕಮಗಳೂರಿನಲ್ಲಿ ನಡೆದ 17ರ ವಯೋಮಾನದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜೆ.ಇ.ಎಂ. ಶಾಲೆ, ಕಳಸದ ವಿದ್ಯಾರ್ಥಿಗಳು ಶ್ರೇಷ್ಠ ಪ್ರದರ್ಶನ ತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ..
ಬಾಲಕಿಯರ ವಿಭಾಗದಲ್ಲಿ 3000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ವಿಧುಷ ಜೈನ್ ಪ್ರಥಮ ಸ್ಥಾನ ಪಡೆದು ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 200 ಮೀಟರ್ ಓಟದಲ್ಲಿ ಸೃಷ್ಟಿ ಎಂ. ಜೈನ್ ದ್ವಿತೀಯ ಸ್ಥಾನ, 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ, ಲಾಸ್ಯ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಸನಾ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಸೇರಿದಂತೆ 400*100 ರಿಲೇ ಓಟದಲ್ಲಿ ತಂಡ ತೃತೀಯ ಸ್ಥಾನ ಗಳಿಸಿದೆ.
ಬಾಲಕರ ವಿಭಾಗದಲ್ಲಿ 5000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಮೊಹಮ್ಮದ್ ಫಾರೀಸ್ ಪ್ರಥಮ ಸ್ಥಾನ ಹಾಗೂ 400 ಮೀಟರ್ ಅಡೆ ತಡೆ ಓಟದಲ್ಲಿ ಶುಬೋಧ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.
ಇದೇ ರೀತಿಯಾಗಿ 14ರ ವಯೋಮಿತಿಯ 600 ಮೀಟರ್ ಓಟದಲ್ಲಿ ಧನುಷ್ ಎ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಉನ್ನತ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.


