ಕಳಸ ಲೈವ್ ವರದಿ
ದಕ್ಷಿಣಕಾಶಿ ಕಲಶಕ್ಷೇತ್ರ ಶ್ರೀ ಕಲಶೇಶ್ವರಸ್ವಾಮಿ ದೇವರ ಲಕ್ಷ ದೀಪೋತ್ಸವ ಮತ್ತು ಅಡ್ಡಪಲ್ಲಕಿ ಉತ್ಸವ ಇದೇ ತಿಂಗಳ 19ರ ಬುಧವಾರ ಭಕ್ತಿಭಾವದ ವೈಭವದಲ್ಲಿ ನೆರವೇರಲಿದೆ.
ಪ್ರತಿ ವರ್ಷ ನಡೆಯುವ ಶ್ರೀ ದೇವರ ಲಕ್ಷ ದೀಪೋತ್ಸವ ಈ ಬಾರಿ ಇನ್ನಷ್ಟು ಶ್ರದ್ಧಾಭಕ್ತರ ಸಮ್ಮಿಲನಕ್ಕೆ ವೇದಿಕೆಯಾಗಿದೆ. ದೇವಸ್ಥಾನ ಮತ್ತು ಕಲಶಕ್ಷೇತ್ರದ ವಿವಿಧ ಸನ್ನಿಧಿಗಳಲ್ಲಿ ಸಾವಿರಾರು ದೀಪಗಳಿಂದ ಅಲಂಕೃತವಾಗಿ ಭಕ್ತರು ದೇವರ ದರ್ಶನ ಪಡೆಯಲಿದ್ದಾರೆ.
ಅದೇ ದಿನ ಶ್ರೀ ಕಲಶೇಶ್ವರಸ್ವಾಮಿ ಅಡ್ಡಪಲ್ಲಕಿ ಉತ್ಸವವೂ ವಿಜೃಂಭಣೆಯಿಂದ ನಡೆಯಲಿದ್ದು, ಪವಿತ್ರ ಸನ್ನಿಧಿಯಿಂದ ಹೊರಡುವ ಪಲ್ಲಕಿ ಕಳಸದ ಮುಖ್ಯ ರಥಬೀದಿಯಲ್ಲಿ ಭಕ್ತರ ಮೆರವಣಿಗೆಯೊಂದಿಗೆ ಸಾಗಲಿದೆ. ಭಜನೆ, ನಾದಸ್ವರ, ವೈದಿಕ ಮಂತ್ರೋಚ್ಚಾರಣೆಗಳ ಮಧ್ಯೆ ಶ್ರಿ ಕಲಶೇಶ್ವರನ ಪವಿತ್ರ ಪಲ್ಲಕಿ ದರ್ಶನ ಭಕ್ತರಿಗೆ ವಿಶೇಷ ಆಕರ್ಷಣೆಯಾಗಲಿದೆ.
