ಕಳಸ ಲೈವ್ ವರದಿ
ಅಡಿಕೆ ಸಾಗಾಟ ವೇಳೆ ನಡೆದ ಡೆಕಾಯಿತಿ ಪ್ರಕರಣವೊಂದನ್ನು ಯಶಸ್ವಿಯಾಗಿ ಭೇದಿಸಿರುವ ನರಸಿಂಹರಾಜಪುರ ಪೊಲೀಸರು ನಾಲ್ವರು ಆರೋಪಿತರನ್ನು ಬಂಧಿಸಿ, ದೋಚಿದ್ದ ಸುಮಾರು ರೂ. 5.71 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ಕಳಸ ಹೆಮ್ಮಕ್ಕಿ ಗ್ರಾಮದ ಭದ್ರಾ ಸೈಟ್ ನಿವಾಸಿ ಅಡಿಕೆ ಚೇಣಿ ವ್ಯಾಪಾರ ಮಾಡುವ ಕೆ.ರವಿ ಕಳಸ ಸಮೀಪದ ಕಾರ್ಗದ್ದೆಯಿಂದ ಹಸಿ ಅಡಿಕೆ ಖರೀದಿಸಿ ಪಿಕಪ್ ವಾಹನದಲ್ಲಿ 67 ಚೀಲ ಅಡಿಕೆ ಕಾಯಿಗಳನ್ನು ತುಂಬಿಕೊAಡು ಭದ್ರಾವತಿ ಕಡೆಗೆ ಚಾಲಕ ವಿಶ್ವಾಸ್ ಅವರೊಂದಿಗೆ ತೆರಳುತ್ತಿದ್ದಾಗ ಬಾಳೆಹೊನ್ನೂರು–ನರಸಿಂಹರಾಜಪುರ ರಸ್ತೆಯ ಅಳೇಹಳ್ಳಿ ಸಮೀಪ ಆರೋಪಿತರು ಅಡ್ಡಹಾಕಿ, ಕತ್ತಿ ಹಾಗೂ ರಾಡಿನಿಂದ ಬೆದರಿಸಿ ಮೇಲೆ ಹಲ್ಲೆ ನಡೆಸಿ ರೂ.29,000 ನಗದು, 44 ಕ್ವಿಂಟಾಲ್ ಅಡಿಕೆ ಹಾಗೂ ಎರಡು ಮೊಬೈಲ್ಗಳನ್ನು ದೋಚಿದ್ದರು. ಈ ಸಂಬAಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕ ಡಾ. ವಿಕ್ರಂ ಅಮಟೆ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಕೊಪ್ಪ ಉಪವಿಭಾಗದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಎನ್.ಆರ್ ಪುರ ವೃತ್ತ ನಿರೀಕ್ಷಕರರಾದ ಶ್ರೀ, ಗುರುದತ್ ಕಾಮತ್ ಎನ್.ಆರ್ ಪುರ ಪೊಲೀಸ್ ಠಾಣೆಯ ಪಿಎಸ್ಐ ರಾದ ಬಿ.ಎಸ್. ನಿರಂಜನ್ ಗೌಡ & ಅಪರಾಧ ವಿಭಾಗದ ಶ್ರೀಮತಿ ಜ್ಯೋತಿ ಎನ್.ಎ ಹಾಗೂ ಸಿಬ್ಬಂದಿಗಳಾದ ಮಧು ಎಸ್.ಜಿ ಸೋಮೇಶ. ಯುಗಾಂಧರ, ಬಿನು ಪಿ.ಎ, ಅಮಿತ್ ಚೌಗುಲೆ, ದೇವರಾಜ, ರೇವಗೊಂಡ ಅರಾಧರ, ಮನು ಎಂ.ಸಿ, ಮುರುಗೇಶ, ಚಂದ್ರಕಾAತ ಪೂಜಾರಿ, ಸ್ವರೂಪ್ ರನ್ನೊಳಗೊಂಡ ತಂಡವನ್ನು ರಚನೆ ಮಾಡಿದ್ದು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ನಯಾಜ್ ಅಂಜುA ಹಾಗು ರಸ್ಥಾನಿ ಇವರ ತಾಂತ್ರಿಕ ಸಹಯೋಗದೊಂದಿಗೆ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಪ್ರಕರಣದ ತನಿಖೆಯನ್ನು ನಡೆಸಿ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಂಧಿತ ಆರೋಪಿಗಳು ಭದ್ರಾವತಿ ತಾಲ್ಲೂಕಿನ ಆಗರದಹಳ್ಳಿ ಕ್ಯಾಂಪ್ ನಿವಾಸಿಗಳಾದ ವಿರೇಶ (27), ಮಹೇಶ್ (24), ಕಾರ್ತಿಕ್ ಎಂ. (22) ಹಾಗೂ ಶ್ರೀಹರಿ ಆರ್. (23) ಆಗಿದ್ದಾರೆ.
ಆರೋಪಿತರಿಂದ ರೂ.2.56 ಲಕ್ಷ ಮೌಲ್ಯದ ಅಡಿಕೆ, ರೂ.3 ಲಕ್ಷ ಮೌಲ್ಯದ ಬೊಲೆರೋ ಪಿಕಪ್ ವಾಹನ ಹಾಗೂ ರೂ.15 ಸಾವಿರ ಮೌಲ್ಯದ ಸ್ಪ್ಲೆಂಡರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಅಪರಾಧ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ
