
ಕಳಸ ಲೈವ್ ವರದಿ
ಕಳಸ ಜೆಸಿಐ ಸಂಸ್ಥೆಯ 2026ನೇ ಸಾಲಿನ ಅಧ್ಯಕ್ಷರಾಗಿ ತನ್ವೀರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಜೆಸಿಐ ಅಧ್ಯಕ್ಷ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಸಭೆಯಲ್ಲಿ 2026ರ ಸಾಲಿಗೆ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಹಾಗೂ ಖಜಾಂಚಿಯಾಗಿ ವಸಂತ ಕಲ್ಮಕ್ಕಿ ಅವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ಅವಧಿಯಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವಂತೆ ಶುಭ ಹಾರೈಸಿದರು.
ನೂತನ ಅಧ್ಯಕ್ಷ ತನ್ವೀರ್ ಮಾತನಾಡಿ, ಜೆಸಿಐ ಸಂಸ್ಥೆಯ ಮೂಲ ಉದ್ದೇಶಗಳನ್ನು ಮುಂದುವರಿಸಿಕೊAಡು ಯುವಶಕ್ತಿಯನ್ನು ಒಗ್ಗೂಡಿಸಿ ಸಾಮಾಜಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು. ಸಭೆಯಲ್ಲಿ ಜೆಸಿಐ ಕಾರ್ಯದರ್ಶಿ ಮುರುಳಿ, ಪೂರ್ವಾಧ್ಯಕ್ಷರಾದ ಮಹೇಶ್ ಬಿ.ಕೆ, ಪ್ರಶಾಂತ್, ಚರಣ್, ಮಹೇಶ್ ಕೆ.ಸಿ. ಶ್ರೀಕಾಂತ್, ಸದಸ್ಯರಾದ ಸಂತೋಷ್, ಮಾರುತೇಶ್, ಪ್ರಭು, ಶಿವಪ್ರಸಾದ್, ನಜೀರ್ ಇತರರು ಇದ್ದರು.


