ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಸ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ರಜತ್ ಕೆಳಗೂರು ವಹಿಸಲಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಜಿ.ಬಿ. ಸುರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಹೆಚ್.ಆರ್. ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಜಾನಪದ ಸಿರಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಮಂಜಮ್ಮ ಹಡ್ಲುಮನೆ ಅವರಿಗೆ ‘ಗೌರವ ಸಮರ್ಪಣೆ’ ಮಾಡಲಾಗುವುದು. ಅಲ್ಲದೆ, ಸಾಧಕ ವಿದ್ಯಾರ್ಥಿಗಳಾದ ಕು|| ವಿದುಷ್ ಜೈನ್, ಕು|| ಮೊಹಮ್ಮದ್ ಶಾಜ್ ಹಾಗೂ ಕು|| ಮೊಹಮ್ಮದ್ ಸಲ್ಮಾನ್ ಫಾರೀಜ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಅ.ರಾ. ಸತೀಶ್ಚಂದ್ರ, ಉದ್ಯಮಿ ಕೆ.ಕೆ. ಬಾಲಕೃಷ್ಣ ಭಟ್, ಜಿಲ್ಲಾ ಸಂಚಾಲಕಿ ಮುಮ್ತಾಜ್ ಬೇಗಂ, ಶೇಖರ್ ಶೆಟ್ಟಿ, ಶ್ರೀಮತಿ ಜಾನಕಿ ಸುಂದರೇಶ್, ಶ್ರೀಮತಿ ಗೀತಾ ಮಕ್ಕಿಮನೆ, ಪಿ.ವಿ. ಕೃಷ್ಣಮೂರ್ತಿ ಭಟ್ ಹಾಗೂ ಶ್ರೀಮತಿ ಸುಮನ ಜಯರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
