oplus_2097154

ಕಳಸ ಲೈವ್ ವರದಿ
ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ತಿರುಗಾಡಬೇಕಿದ್ದ ಆ ಮೂಕಪ್ರಾಣಿ ಇಂದು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದೆ. ಕಳಸ ತಾಲ್ಲೂಕಿನ ಕೋಣೆಬೈಲು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿAದ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣವೊಂದು, ಗಾಯಕ್ಕೆ ತುತ್ತಾಗಿ, ಈಗ ಹಳ್ಳದ ಬದಿಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಈ ಕಾಡುಕೋಣದ ಪರಿಸ್ಥಿತಿ ಕಂಡು ಕಲ್ಲುಹೃದಯದವರಿಗೂ ಕಣ್ಣೀರು ಬರುವಂತಿದೆ. ಕಿಡಿಗೇಡಿಗಳು ಹಾರಿಸಿದ ಗುಂಡೇಟಿಗೋ ಅಥವ ಬಿದ್ದು ಗಾಯ ಮಾಡಿಕೊಂಡಿದ್ದೋ ಅದರ ಹಿಂಬದಿಯ ಬಲಗಾಲಿ ಪಕ್ಕದಲ್ಲಿ ಆಳವಾದ ಗಾಯವಾಗಿದೆ. ಇದರ ಬೆನ್ನಲ್ಲೇ ಆ ಪ್ರಾಣಿ ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನೂ ಕಳೆದುಕೊಂಡಿದೆ. ಕಳೆದ 15 ದಿನಗಳಿಂದ ಕಾಲಿನ ನೋವು ಮತ್ತು ಅಸಹಾಯಕತೆಯಿಂದಾಗಿ ಹಳ್ಳದ ಬದಿಯಲ್ಲೇ ಕುಸಿದು ಬಿದ್ದಿರುವ ಈ ಪ್ರಾಣಿ, ಎದ್ದು ನಿಲ್ಲಲೂ ಸಾಧ್ಯವಾಗದೆ ಮರಣ ವೇದನೆ ಅನುಭವಿಸುತ್ತಿದೆ.
ಕಾಡುಕೋಣದ ಸ್ಥಿತಿಯ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ದಿನಗಳೇ ಉರುಳಿವೆ. ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದ ಅಧಿಕಾರಿಗಳು, ಇದುವರೆಗೆ ಚಿಕಿತ್ಸೆ ನೀಡುವ ಮನಸ್ಸು ಮಾಡಿಲ್ಲ. ಪ್ರಾಣಿಯನ್ನು ಸ್ಥಳಾಂತರಿಸಲು ಸಾಕಷ್ಟು ಅವಕಾಶಗಳಿದ್ದರೂ, ಇಲಾಖೆಯು ಅಸಹಾಯಕತೆ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡುಪ್ರಾಣಿಗಳ ಮೇಲೆ ಸಣ್ಣ ಹಲ್ಲೆಯಾದರೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸುವ ಅರಣ್ಯ ಇಲಾಖೆ, ಕಳೆದ ಒಂದು ತಿಂಗಳಿನಿAದ ಗುಂಡೇಟಿನಿAದ ನರಳುತ್ತಿರುವ ಕಾಡುಕೋಣದ ವಿಷಯದಲ್ಲಿ ಕಣ್ಣುಮುಚ್ಚಿ ಕುಳಿತಿದೆ. ವನ್ಯಜೀವಿಗಳ ಸಂರಕ್ಷಣೆ, ಅವುಗಳ ಆಹಾರ ಮತ್ತು ತುರ್ತು ಚಿಕಿತ್ಸೆಗಾಗಿ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಆದರೆ, ಕಳಸದ ಕೋಣೆಬೈಲಿನಲ್ಲಿ ಹಸಿವಿನಿಂದ ಮತ್ತು ಗಾಯದ ನೋವಿನಿಂದ ಬಳಲುತ್ತಿರುವ ಈ ಮೂಕಪ್ರಾಣಿಗೆ ಒಂದು ಹೊತ್ತಿನ ಆಹಾರ ಅಥವಾ ನೋವು ನಿವಾರಕ ಚಿಕಿತ್ಸೆ ನೀಡಲು ಇಲಾಖೆಯ ಬಳಿ ಹಣವಿಲ್ಲವೇ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಪ್ರಾಣಿಯ ಗಾಯ ಉಲ್ಬಣಿಸಬಾರದೆಂದು ಗ್ರಾಮಸ್ಥರು ಸ್ರ್ಪೇಯರ್ ಪಂಪ್ ಮೂಲಕ ಗಾಯಕ್ಕೆ ನಾಟಿ ಔಷಧಿಯನ್ನು ಸಿಂಪಡಿಸುತ್ತಿದ್ದಾರೆ.ದೃಷ್ಟಿ ಇಲ್ಲದ, ನಡೆಯಲಾಗದ ಆ ಪ್ರಾಣಿಗೆ ಪ್ರತಿದಿನ ಹಸಿ ಹುಲ್ಲು ಮತ್ತು ಆಹಾರವನ್ನು ತಂದು ಹಾಕುತ್ತಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಗಾಯದ ಸೋಂಕು ಹೆಚ್ಚಾಗುತ್ತಿದ್ದು, ಪ್ರಾಣಿಯ ಸ್ಥಿತಿ ಕ್ಷೀಣಿಸುತ್ತಿದೆ.
ನಾವು ಬೇಕಾದರೆ ನಮ್ಮ ಜೀವದ ಹಂಗು ತೊರೆದು ಆ ಕಾಡುಕೋಣವನ್ನು ಹಗ್ಗದಿಂದ ಕಟ್ಟಿ ಕೊಡುತ್ತೇವೆ. ಇಲಾಖೆಯವರು ಬಂದು ಅದಕ್ಕೆ ವೈಜ್ಞಾನಿಕ ಚಿಕಿತ್ಸೆ ನೀಡಲಿ. ಕಳೆದ ಒಂದು ತಿಂಗಳಿನಿAದ ಆ ಮೂಕಪ್ರಾಣಿ ಗಾಯದಿಂದ ನರಳುತ್ತಿದ್ದರೂ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಕನಿಷ್ಠ ಮಾನವೀಯತೆಯನ್ನಾದರೂ ತೋರಿಸಿ ಪ್ರಾಣಿಯನ್ನು ರಕ್ಷಿಸಿ ಎಂದು ಗ್ರಾಮಸ್ಥರಾದ ಸತೀಶ್ ನೋವಿನಿಂದ ನುಡಿಯುತ್ತಾರೆ.
ನಿಶ್ಚಿತ್ ; ಕಳಸ ವಲಯಾರಣ್ಯಾಧಿಕಾರಿ
ಕಾಡು ಕೋಣ ಜಾರಿ ಬಿದ್ದು ಗಾಯವಾಗಿರಬೇಕೆ ಹೋರತು, ಯಾವುದೇ ಗುಂಡೇಟು ಬಿದ್ದಿಲ್ಲ.ಕಾಡು ಕೋಣವನ್ನು ಅಲ್ಲಿಂದ ಸ್ಥಳಾಂತರ ಮಾಡಬೇಕಾದರೆ ಅದಕ್ಕೆ ಇಂಜೆಕ್ಟ್ ಮಾಡಿಯೇ ಸ್ಥಳಾಂತರ ಮಾಡಬೇಕು.ಈ ಬಗ್ಗೆ ವೈದ್ಯರು ಇಂಜೆಕ್ಟ್ ಮಾಡಿದ್ರೆ ಸಾಯುವ ಸ್ಥಿತಿ ಇದೆ ಅನ್ನುವ ಅಭಿಪ್ರಾಯಕ್ಕೆ ಅದಕ್ಕೆ ಚಿಕಿತ್ಸೆ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಪೆçöÊಯರ್ ಮುಖಾಂತರ ಸಿಬ್ಬಂದಿಗಳು ಗಾಯವಾದ ಸ್ಥಳಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ. ಸಿಬ್ಬಂದಿಗಳು ಪ್ರತೀ ದಿನ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತಿದ್ದಾರೆ.
