
ಕಳಸ ಲೈವ್ ವರದಿ
ಸಂಸೆ ಗ್ರಾಮದ ಹೊಸಮಕ್ಕಿ ಬಳಿ ಇರುವ ಕೆ.ಐ.ಒ.ಸಿ.ಎಲ್ ಕಂಪನಿಗೆ ಸೇರಿದ ನಿಷೇಧಿತ ಪ್ರದೇಶದಲ್ಲಿ ಕೇಬಲ್ ಹಾಗೂ ಎಲೆಕ್ಟ್ರಿಕಲ್ ಉಪಕರಣಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೃತ್ಯಕ್ಕೆ ಬಳಸಿದ ವಾಹನ ಸಮೇತ ಹಿಡಿದು ಕುದುರೆಮುಖ ಪೊಲೀಸರು ಬಂಧಿಸಿದ್ದಾರೆ.
ಕ0ಪನಿಯ ಡಿ.ಜಿ.ಎಂ ಕಾರ್ಯಪ್ಪ ಟಿ.ಎಂ. ಅವರು ನೀಡಿರುವ ದೂರಿನಂತೆ ಜುಲೈ 20ರಂದು ಬೆಳಿಗ್ಗೆ ಸುಮಾರು 8:00 ಗಂಟೆಗೆ ಸಂಸ್ಥೆಯ ಸೆಕ್ಯೂರಿಟಿ ಸೂಪರ್ವೈಸರ್ ರಾಜಶೇಖರ್ ಅವರು ಕರ್ತವ್ಯಕ್ಕೆ ತೆರಳುತ್ತಿದ್ದಾಗ, ಹೊಸಮಕ್ಕಿ ಸರ್ಕಲ್ನಿಂದ ಶಾಫ್ಸ್ಗೆ ಹೋಗುವ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಕಂಪನಿಯ ಜಾಗದಲ್ಲಿ ಅನುಮಾನಾಸ್ಪದವಾಗಿ ವಾಹನವನ್ನು ಗಮನಿಸಿದ್ದಾರೆ.
ವಾಹನದ ಹಿಂಭಾಗ ಪರಿಶೀಲಿಸಿದಾಗ ಕಂಪನಿಗೆ ಸೇರಿದ ಕೇಬಲ್ಗಳು, ಪೈಪ್ಗಳು ಹಾಗೂ ವಿವಿಧ ಎಲೆಕ್ಟ್ರಿಕಲ್ ಸಾಮಗ್ರಿಗಳು ಕಂಡುಬAದಿವೆ. ತಕ್ಷಣವೇ ಕಂಪನಿಯ ಅಧಿಕಾರಿ ಶ್ರೇಯಸ್ ಹಾಗೂ ಡಿ.ಜಿ.ಎಂ ಕಾರ್ಯಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ವಾಹನದ ಬಳಿಯಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿನೋಭ ನಗರದ ರವಿ, ಅಯ್ಯಪ್ಪ, ಜಾರ್ಜ್ ಕುಟ್ಟಿ ಎಂದು ಗುರುತಿಸಲಾಗಿದೆ.
ಸುಮಾರು ₹25,000 ಮೌಲ್ಯದ ಕಳವು ಮಾಡಿದ ಸಾಮಗ್ರಿ ಮತ್ತು ಬಳಕೆ ಮಾಡಿ ವಾಹನವನ್ನು ವಶಪಡಿಸಿಕೊಂಡು ಕಳ್ಳತನದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂದಿಸಲಾಗಿದೆ.
ಕಾರ್ಯಚರಣೆಯಲ್ಲಿ ಕುದುರೆಮುಖ ಪಿಎಸೈ ಲೋಕೇಶ್, ಸಿಬ್ಬಂದಿಗಳಾದ ರಾಜೇಶ್, ಅನಿಲ್, ಮಂಗಳದಾಸ್ ಇದ್ದರು.
