ಕಳಸ ಲೈವ್ ವರದಿ
ಸ್ಥಳೀಯ ಮಾವಿನಕೆರೆ ಎಸ್ಟೇಟಿನಲ್ಲಿ ಶುಕ್ರವಾರ ಮರಗಸಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ತರೀಕೆರೆ ಮೂಲದ ಮಂಜ (53) ಮೃತಪಟ್ಟ ದುರದೃಷ್ಟಕರ ಕಾರ್ಮಿಕ.
ಶುಕ್ರವಾರ ಮಾವಿನಕೆರೆ ಎಸ್ಟೇಟಿನಲ್ಲಿ ಸುಮಾರು 50 ಅಡಿ ಎತ್ತರದ ಮರವನ್ನು ಏರಿ ಮರಗಸಿ ಕೆಲಸ ಮಾಡುತ್ತಿದ್ದಾಗ, ಮಂಜ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತೀವ್ರ ಸ್ವರೂಪದ ಪೆಟ್ಟು ಬಿದ್ದ ಕಾರಣ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಘಟನೆಯ ಬಳಿಕ ಮೃತದೇಹವನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
