ಕಳಸ ಲೈವ್ ವರದಿ
ಚಿಕ್ಕಮಗಳೂರು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಗೆ ಕಳಸ ತಾಲ್ಲೂಕಿನ ಸದಸ್ಯರೊಬ್ಬರನ್ನು ಬದಲಾವಣೆ ಮಾಡಿ ಕರ್ನಾಟಕ ಸರ್ಕಾರವು ಜುಲೈ 16ರಂದು ಮಹತ್ವದ ತಿದ್ದುಪಡಿ ಆದೇಶ ಹೊರಡಿಸಿದೆ.
ದಿನಾಂಕ: 07.03.2024ರ ಅನ್ವಯ ಚಿಕ್ಕಮಗಳೂರು ಜಿಲ್ಲೆಗೆ ಸಂಬ0ಧಿಸಿದ0ತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ರಚಿಸಲಾಗಿತ್ತು. ಪ್ರಸ್ತುತ ಈ ಸಮಿತಿಯಲ್ಲಿದ್ದ ಕಳಸದ ಸದಸ್ಯರನ್ನು ಮುಂದಿನ ಆದೇಶದವರೆಗೆ ಬದಲಾಯಿಸಿ, ಅವರ ಜಾಗಕ್ಕೆ ಹೊಸ ಸದಸ್ಯರನ್ನು ನೇಮಕ ಮಾಡಲಾಗಿದೆ.
ಇದುವರೆಗೆ ಕಳಸ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಗಣೇಶ್ ಭಟ್ ಅವರ ಬದಲಾಗಿ, ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಕೆ.ಎ. ಶ್ರೇಣಿಕ್ ಅವರನ್ನು ಹೊಸ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ. ಗಣೇಶ್ ಭಟ್ ಅವರು ಕಳಸ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಹಿನ್ನೆಲೆಯಲ್ಲಿ ಈಗ ಅವರ ಸ್ಥಾನವನ್ನು ಕೆ.ಎ. ಶ್ರೇಣಿಕ್ ಅವರು ತುಂಬಲಿದ್ದಾರೆ.
