
ಕಳಸ ಲೈವ್ ವರದಿ
ಕಳಸ ಭದ್ರಾ ನದಿಯ ರುದ್ರಪಾದದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ರುದ್ರಪಾದದಲ್ಲಿ ಸ್ಥಳಿಯರು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ತೇಲಾಡುತ್ತಿದ್ದ ಶವವನ್ನು ಕಂಡು ಕಳಸ ಪೊಲೀಸ್ ಠಾಣೆಗೆ ಸುದ್ಧಿಯನ್ನು ಮುಟ್ಟಿಸಿದ್ದಾರೆ.
ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.
ಬಣಕಲ್ ನಿವಾಸಿಯೊಬ್ಬ ನಿನ್ನೆಯಿಂದ ಕಾಣೆಯಾಗಿದ್ದಾನೆ.ಕಳಸದಲ್ಲಿ ದೂರವಾಣಿ ನೆಟ್ವರ್ಕ್ನಲ್ಲಿ ಇದ್ದ ನಂತರ ಪೋನ್ ಸ್ವಿಚ್ ಆಫ್ ಆಗಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು.ಅದೇ ವ್ಯಕ್ತಿಯ ಮೃತದೇಹ ಆಗಿರಬಹುದು ಎಂದು ಅಂದಾಜಿಸಿಲಾಗಿದೆಯಾದರೂ, ಕಾಣೆಯಾದ ವ್ಯಕ್ತಿಯ ಪೋಷಕರು ಬಂದ ಮೇಲೆ ದೃಡವಾಗಲಿದೆ.